- Shree Marikamba
- Shree Marikamba
- Shree Marikamba
- Shree Marikamba
- Shree Marikamba
- Shree Marikamba
BREAKING NEWS
-
21st December,2025
ದಕ್ಷಿಣ ಭಾರತದ ಸುಪ್ರಸಿಧ್ದ ಶಿರಸಿಯ ಶ್ರೀ ಮಾರಿಕಾಂಬಾ ದೇವಿಯ ಜಾತ್ರೆಯು ದಿನಾಂಕ : 24-02-2026 ರಿಂದ 04-3-2026 ರ ವರೆಗೆ ವೈಭವದಿಂದ ನಡೆಯಲಿದೆ. ಸರ್ವರಿಗೂ ಸುಸ್ವಾಗತ / We Cordially invite you and solicit your devotional presence with your family & friends on the auspicious ceremony of Goddess Shri MARIKAMBA DEVI JATRA MAHOTSAVA to be held from 24-02-2026 ,Tuesday to 04-03-2026 , Wednesday at Devi Gadduge Bidakibail, Sirsi Offerings and Sevas will start from 26-02-2026, 5.00 a.m. All are WELCOME
ದೇವಾಲಯದ ಇತಿಹಾಸ
ಶ್ರೀ ಮಾರಿಕಾಂಬಾ ದೇವಿಯ ಪ್ರತಿಷ್ಠಾಪನೆ ಪ್ರಥಮತ: ಕ್ರಿ.ಶಕ ೧೬೮೯ ರಲ್ಲಿ ಜರುಗಿತು. ಆಗ ಶಿರಸಿ ಒಂದು ಕುಗ್ರಾಮವಾಗಿತ್ತು. ಇಲ್ಲಿಯ ಒಂದು ಕೆರೆಯಲ್ಲಿ ಸಿಕ್ಕಿತೆಂದು ಹೇಳಲಾಗುವ, ಶ್ರೀ ದೇವಿಯ ಕಟ್ಟಿಗೆಯ ವಿಗ್ರಹವನ್ನು ಸ್ಥಾಪಿಸಲು ಭಕ್ತರು ಆಗ ವಿಜಯನಗರ ಸಾಮ್ರಾಜ್ಯದ ಅಂಗವಾಗಿದ್ದ ಸೋಂದಾ ರಾಜ್ಯದ ಮಹಾಪ್ರಭುಗಳಲ್ಲಿ ವಿನಂತಿಸಿದಾಗ, ಅರಸರಾದ ಶ್ರೀ ಇಮ್ಮಡಿ ಸದಾಶಿವರಾಯರು, ಶಿರಸಿಯಲ್ಲಿ ಗ್ರಾಮದೇವತೆಯಾಗಿ, ಶ್ರೀ ದೇವತೆಯನ್ನು ಪ್ರತಿಷ್ಠೆ ಮಾಡಲು ಅನುಮತಿ ನೀಡಿದರು. ನೂರಾರು ವರ್ಷಗಳವರೆಗೆ ಊರಿನ ಹಿರಿಯರೇ, ಮುಂದಾಳುಗಳಾಗಿ ಆಡಳಿತವನ್ನು ನೋಡಿಕೊಳ್ಳುತ್ತಿದ್ದರು. ಶ್ರೀ ದೇವಸ್ಥಾನದ ಭವ್ಯವಾದ ಚಂದ್ರಶಾಲೆ, ಗರ್ಭಗುಡಿ, ಗೋಪುರ ಮತ್ತು ಮಹಾದ್ವಾರಗಳೆಲ್ಲ ಕ್ರಿ.ಶಕ ೧೮೫೦ ರಿಂದ ೧೮೭೫ ರ ಒಳಗೆ ನಿರ್ಮಾಣವಾದವು. ಕ್ರಿ.ಶಕ ೧೯೫೫ ರಿಂದ ದೇವಸ್ಥಾನದ ಆಡಳಿತವು ೫ ಜನ ಸದಸ್ಯರುಳ್ಳ ಧರ್ಮದರ್ಶಿಗಳ ಮಂಡಳದ ಅಧಿಕಾರಕ್ಕೆ ಒಳಪಟ್ಟಿದೆ. ಉ.ಕ. ಜಿಲ್ಲಾ ನ್ಯಾಯಾಧೀಶರು ಪ್ರತಿ ೫ ವರ್ಷಗಳಿಗೊಮ್ಮೆ ಧರ್ಮದರ್ಶಿಗಳನ್ನು ನಾಮಕರಣ ಮಾಡುತ್ತಾರೆ. ಬಂಗಾಲದ ಕಾಲಿಕಾ, ಮಹಾರಾಷ್ಟ್ರ ಮತ್ತು ರಾಜಸ್ಥಾನದ ಅಂಬಾ ಭವಾನಿಯಂತೆ, ಶಿರಸಿಯ ಶ್ರೀ ಮಾರಿಕಾಂಬೆ ಕರ್ನಾಟಕದ ಅತ್ಯಂತ ಜಾಗೃತ ಶಕ್ತಿ ಪೀಠವೆನಿಸಿದೆ. ಕೇವಲ ಪ್ರಾರ್ಥನೆಯಿಂದ ಭಕ್ತರ ಸಕಲ ಇಷ್ಟಾರ್ಥಗಳನ್ನು ಪೂರೈಸುವಲ್ಲಿ ಶ್ರೀ ದೇವಿಯ ಪ್ರಸಿದ್ದಿ ಇದೆ. ಜಯಂತಿ, ನವರಾತ್ರಿ, ಕಾರ್ತಿಕೋತ್ಸವ ಹಾಗೂ ಎರಡು ವರ್ಷಗಳಿಗೊಮ್ಮೆ ಎಂಟು ದಿನಗಳ ವೈಭವ ಪೂರ್ಣ ಜಾತ್ರೆ, ಇವು ಇಲ್ಲಿ ಜರುಗುವ ಪ್ರಸಿದ್ದ ಧಾರ್ಮಿಕ ಉತ್ಸವಗಳು. ಶ್ರೀ ದೇವಿಯಲ್ಲಿ ಮಂಗಳವಾರ, ಶುಕ್ರವಾರ ಬೆಳಿಗ್ಗೆ ೭ ರಿಂದ ರಾತ್ರಿ ೧೦ ಘಂಟೆಯವರೆಗೆ, ಉಳಿದ ದಿನಗಳಲ್ಲಿ ಬೆಳಿಗ್ಗೆ ೭ ರಿಂದ ರಾತ್ರಿ ೯ ಘಂಟೆಯವರೆಗೆ ಸೇವೆಗಳು ನಡೆಯುತ್ತವೆ. ಶ್ರೀ ದೇವಾಲಯವು ಶೈಕ್ಷಣಿಕ - ಸಾಂಸ್ಕೃತಿಕ ಕಾರ್ಯಕ್ರಮಗಳ ಕೇಂದ್ರವೂ ಆಗಿದೆ. ಅದಲ್ಲದೇ ಗ್ರಂಥಾಲಯ - ವಾಚನಾಲಯಗಳಿವೆ.








